
Kadina Benki - Dsouza Na ಈ ಕಾದಂಬರಿಯ ಹಿಂದೆ ಒಂದು ಕತೆ ಇದೆ. ೧೯೮೪ರ ಸುಮಾರಿಗೆ ಶಿವಮೊಗ್ಗೆಯ ಶ್ರೀಯುತ ಅಶೋಕ ಪೈಗಳು ಒಂದು ಕತೆಯನ್ನು ಹೇಳಿದರು. ಮನುಷ್ಯನ ಬದುಕಿನ ಪ್ರಮುಖ ಆಕರ್ಷಣೆಯಾದ ಲೈಂಗಿಕ ವಿಷಯಕ್ಕೆ ಸಂಬಂಧಪಟ್ಟ ಕತೆ ಅದು. ಈ ಕತೆಯನ್ನು ಅವರು ಹೇಳುವಾಗ ಅಲ್ಲಿ ನನ್ನ ಸ್ನೇಹಿತರಾದ ಸಂತೋಷಕುಮಾರ ಗುಲ್ವಾಡಿ ಈ ಕತೆಯನ್ನು ಒಂದು ಕಾದಂಬರಿಯನ್ನಾಗಿ ಬರೆಯಲು ಹೇಳಿದರು. ಅಲ್ಲದೆ ಈ ಕಾದಂಬರಿಯನ್ನು ಅವರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಿಸುವ ಭರವಸೆಯನ್ನೂ ನೀಡಿದರು. ಕತೆ ನನ್ನ ಹಿಂಡಿ ಹಾಕಿದ್ದರಿಂದ...